ಕಾರ್ಯಕಾರಿ ಮಂಡಳಿ ಸಭೆಯ ಕರೆಯೋಲೆ

ಕರ್ನಾಟಕ ರಾಜ್ಯ ಮಡಿವಾಳರ ಸಂಘಟನೆಗಳ ಒಕ್ಕೂಟ (ರಿ )ಬೆಂಗಳೂರು
ಕಾರ್ಯಕಾರಿ ಮಂಡಳಿಯ ಸಭೆಯು ದಿನಾಂಕ 06-೦8-2023ನೇ ಭಾನುವಾರ ಬೆಳಿಗ್ಗೆ ಗಂಟೆ 10 ಕ್ಕೆ ಸರಿಯಾಗಿ ಬೆಂಗಳೂರು ಮಲ್ಲೇಶ್ವರಂ ಕರ್ನಾಟಕ ರಾಜ್ಯ ಸಹಕಾರಿ ಸಕ್ಕರೆ ಕಾರ್ಖಾನೆಗಳ ಮಹಾಮಂಡಲದ ಸಭಾಂಗಣದಲ್ಲಿ
ನಡೆಯಲಿರುವುದರಿಂದ ರಾಜ್ಯ ಸದಸ್ಯತ್ವವನ್ನು ಪಡೆದ ಪದಾಧಿಕಾರಿಗಳು ಭಾಗವಹಿಸುವಂತೆ ಈ ಮೂಲಕ ವಿನಂತಿಸಲಾಗಿದೆ.
ವಿಷಯ :
1.ರಾಷ್ಟ್ರೀಯ ಮಡಿವಾಳರ ಸಂಘಟನೆಗಳ ಒಕ್ಕೂಟವನ್ನು ನವದೆಹಲಿಯಲ್ಲಿ ನೋಂದಾಯಿಸುವ ಬಗ್ಗೆ. ಮತ್ತು ಇದಕ್ಕೆ ಸಂಬಂಧಿಸಿದ ನಿಯಮಾವಳಿ ಬೈಲಾ ರಚನೆಯ ಬಗ್ಗೆ.

2. ಕಾರ್ಯನಿರ್ವಹಿಸದ ರಾಜ್ಯ ಪದಾಧಿಕಾರಿಗಳ ನೇಮಕಾತಿಯನ್ನು ಮತ್ತು ಅಸ್ತಿತ್ವ ವನ್ನು ಪುನರ್ ಪರಿಶೀಲಿಸುವ ಬಗ್ಗೆ.

ವಿವಿಧ ಘಟಕಗಳ ಅಧ್ಯಕ್ಷರುಗಳ ನೇಮಕಾತಿಯನ್ನು ಮತ್ತು ಅಸ್ತಿತ್ವವನ್ನು ಪುನರ್ ಪರಿಶೀಲಿಸುವ ಬಗ್ಗೆ.

ವಿವಿಧ ನೂತನ ಪದಾಧಿಕಾರಿ ನೇಮಕಾತಿ ಯನ್ನು ಪ್ರಕಟಿಸುವ ಬಗ್ಗೆ ನೇಮಕಾತಿಯನ್ನು ಅನುಮೋದಿಸುವ ಬಗ್ಗೆ

3. ವಿವಿಧ ಘಟಕಗಳಿಗೆ ಸದಸ್ಯತ್ವವನ್ನು ಮಾಡುವುದರ ಮೂಲಕ ಕಾರ್ಯಕಾರಿ ಮಂಡಳಿ ಯನ್ನು ನಿಯಮ ಪ್ರಕಾರ ರಚನೆ ಮಾಡುವ ಬಗ್ಗೆ

4. ಒಕ್ಕೂಟದ ಜಾಲತಾಣ ಮತ್ತು ಮೊಬೈಲ್ ಆಪ್ ಲೋಕಾರ್ಪಣೆ ಮಾಡುವ ಬಗ್ಗೆ

5. ಜಾಲತಾಣ ಮತ್ತು ಮೊಬೈಲ್ ಯಾಪ್ ಗೆ ಒಂದು ವರ್ಷದ ಅವಧಿಗೆ ಜಾಹೀರಾತು ನೀಡುವ ಬಗ್ಗೆ.

6.ದೇಣಿಗೆಯನ್ನು ನೀಡುವ ಬಗ್ಗೆ

7 ಮಾಜಿ ದರ್ಪಣ ಸಂಚಿಕೆಯನ್ನು ಮಾಡುವ ಬಗ್ಗೆ ಮತ್ತು ಈ ಬಗ್ಗೆ ಜಾಹಿರಾತು ಪಡೆದುಕೊಳ್ಳುವ ಬಗ್ಗೆ
8. ಚಿಕ್ಕಮಗಳೂರು ಜಿಲ್ಲಾ ಘಟಕ ಮತ್ತು ಹಾಸನ ಜಿಲ್ಲಾ ಘಟಕದ ಲೆಕ್ಕಪತ್ರವನ್ನು ಮಂಡಿಸುವ ಬಗ್ಗೆ
ಈ ಎರಡು ಘಟಕಗಳು ಲೆಕ್ಕಪತ್ರ ಮಂಡಿಸಿದ ನಂತರದಲ್ಲಿ ಸ್ಥಳೀಯ ಬ್ಯಾಂಕಿನಲ್ಲಿ ಉಳಿದ ಖಾತೆಯನ್ನು ತೆರೆದು ವ್ಯವಹರಿಸುವ ಬಗ್ಗೆ

ಇತರ ವಿಷಯಗಳು
ಅಧ್ಯಕ್ಷರ ಅನುಮತಿ ಮೇರೆಗೆ

ಇತೀ ತಮ್ಮ ವಿಶ್ವಾಸಿ
ಶ್ರೀ ಕೇಶವ ಪ್ರಸಾದ್ ಪ್ರಧಾನ ಕಾರ್ಯದರ್ಶಿಗಳು
ವಿಶೇಷ ಸೂಚನೆ
ಕಾರ್ಯಕಾರಿ ಮಂಡಳಿಯಲ್ಲಿ ಭಾಗವಹಿಸುವವರು ಕಡ್ಡಾಯವಾಗಿ ಸಿ ಸದಸ್ಯತ್ವವನ್ನು ಪಡೆದವರಾಗಿರಬೇಕು

ಸದಸ್ಯರಲ್ಲದವರು ಅಧ್ಯಕ್ಷರ ಅನುಮತಿ ಇಲ್ಲದೆ ಯಾರೂ ಕೂಡ ಸಭೆಯಲ್ಲಿ ಭಾಗವಹಿಸುವಂತಿಲ್ಲ
ಆದುದರಿಂದ ಈ ಕೂಡಲೇ ಸದಸ್ಯತ್ವವನ್ನು ಪಡೆಯಬೇಕಾಗಿ ಈ ಮೂಲಕ ವಿನಂತಿಸಲಾಗಿದೆ
ಕಾರ್ಯಕಾರಿಣಿ ಸಭೆಯ ಎಲ್ಲಾ ಸದಸ್ಯರು ಕೂಡ ತಮಗೆ ನೀಡಿದ ರಾಜ್ಯ ಸದಸ್ಯತ್ವ ಐಡಿಯನ್ನು ಸಭೆ ಯಲ್ಲಿ ಪ್ರಸ್ತುತಪಡಿಸಬೇಕು
ಎಲ್ಲರೂ ನಿಯಮವನ್ನು ಪಾಲಿಸತಕ್ಕದ್ದು
ಪ್ರಧಾನ ಕಾರ್ಯದರ್ಶಿಗಳು

Leave a Reply

See our gallery

ನಮ್ಮ ಸದಸ್ಯತ್ವ ಬೇಕೇ? ಕೂಡಲೇ ಕರೆ ಮಾಡಿ...