ಕೊಡಗು ಜಿಲ್ಲೆ ಅಳುವಾರ ಅಳಿಲು ಗುಪ್ಪೆ ಗ್ರಾಮದಲ್ಲಿ *ಮಡಿವಾಳ ಮಾಚಿ ದೇವರ ಜಯಂತಿ*

ದಿನಾಂಕ 2.2. 2024 ನೇ ಶುಕ್ರವಾರ ಕೊಡಗು ಜಿಲ್ಲೆ ಅಳುವಾರ ಅಳಿಲು ಗುಪ್ಪೆ ಗ್ರಾಮದಲ್ಲಿ *ಮಡಿವಾಳ ಮಾಚಿ ದೇವರ ಜಯಂತಿ* ಕಾರ್ಯಕ್ರಮವನ್ನು
*ವೀರ ಮಡಿವಾಳ ಮಾಚಿದೇವ ಸಂಘ ಅಳಿಲು ಗುಪ್ಪೆ* ರವರು ಸಂಘಟಿಸಿದರು.
*ನದಿಯ ದಡದಲ್ಲಿ ಮಾಚಿದೇವರ ಭಾವಚಿತ್ರವನ್ನು ಇಟ್ಟು ಐದು ಕಲಶ,ಒಂದು ಪೂರ್ಣ ಕುಂಭ ಕಲಶ ದೊಂದಿಗೆ ಫಲ ಪುಷ್ಪಾದಿಗಳಿಂದ ಸಿಂಗಾರಿಸಿ ಸಂಪ್ರದಾಯ ಬದ್ಧವಾದ ಪೂಜೆಯನ್ನು ಮಾಡಿ ದೀವಿಟಿಕೆಯನ್ನು ಬೆಳಗಿಸಿ ಶೋಭಾ ಯಾತ್ರೆಯ ಮೂಲಕ ಸಂಘದ ಸಭಾಂಗಣಕ್ಕೆ ಬಂದು ಮಹಾ ಪೂಜೆಯನ್ನ ನಿರ್ವಹಿಸಲಾಯಿತು. ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರು *ಕೆ.ಬಿ. ದೇವರಾಜ್* ಕರ್ನಾಟಕ ರಾಜ್ಯ ಮಡಿವಾಳರ ಸಂಘಟನೆಗಳ ಒಕ್ಕೂಟದ ಕೊಡಗು ಜಿಲ್ಲಾ ಅಧ್ಯಕ್ಷರಾದ *ಪ್ರಸನ್ನ ಕುಮಾರ್ ಜಿ.ಎಸ್.*
ಶ್ರೀ ವೀರ ಮಡಿವಾಳ ಮಾಚಿದೇವರ ಸಂಘದ ಅಧ್ಯಕ್ಷರಾದ *ಕಾಂತರಾಜು. ಎ. ಬಿ.* ಮತ್ತು ಹಿರಿಯರ ಹಾಗೂ ಸಮಾಜ ಬಂಧುಗಳ ಮತ್ತು ಪದಾಧಿಕಾರಿಗಳ ಉಪಸ್ಥಿತಿಯಲ್ಲಿ ಕರ್ನಾಟಕ ರಾಜ್ಯ ಮಡಿವಾಳರ ಸಂಘಟನೆಗಳ ಒಕ್ಕೂಟದ ರಾಜ್ಯಾಧ್ಯಕ್ಷರಾದ *ಕಟೀಲು ಸಂಜೀವ ಮಡಿವಾಳರು* ಮಾಚಿ ದೇವರ ಜಯಂತಿಯ ಕಾರ್ಯಕ್ರಮದ ವನ್ನು ದೀಪ ಬೆಳಗಿಸುವ ಮೂಲಕ ಉದ್ಘಾಟನೆಯನ್ನು ಮಾಡಿದರು. ಮಧ್ಯಾಹ್ನ ಅನ್ನಸಂತರ್ಪಣ ಕಾರ್ಯಕ್ರಮ ಸ್ಥಳೀಯ ಗ್ರಾಮಸ್ಥರಿಗೆ ಮತ್ತು ಸಮಾಜ ಬಾಂಧವರಿಗೆ ವಿವಿಧ ಕ್ರೀಡಾ ಕಾರ್ಯಕ್ರಮಗಳನ್ನು ಸಂಯೋಜನೆ ಮಾಡಲಾಯಿತು.

*ಈ ಕಾರ್ಯಕ್ರಮವನ್ನು ಬಹಳ ವಿಜೃಂಭಣೆಯಿಂದ ಯಶಸ್ವಿಯಾಗಿ ಪೂರೈಸಿದ ತಮಗೆಲ್ಲರಿಗೂ ಆತ್ಮೀಯವಾದಂತ ವಂದನೆಗಳನ್ನು ಅರ್ಪಿಸುತ್ತೇವೆ

Leave a Reply

See our gallery

ನಮ್ಮ ಸದಸ್ಯತ್ವ ಬೇಕೇ? ಕೂಡಲೇ ಕರೆ ಮಾಡಿ...