About Us

ಒಕ್ಕೂಟದ ಮುಖ್ಯ ಉದ್ದೇಶಗಳು:

ಸಂಘದ ಉದ್ದೇಶಗಳಿಗೆ ಸಾರ್ಥಕವಾದ ಮತ್ತು ಅವಶ್ಯಕವಾದ ಚಟುವಟಿಕೆಗಳನ್ನು ಕೈಗೊಳ್ಳುತ್ತಿರುವುದು.
ಹೊಲಿಗೆ ತರಬೇತಿ ಗೃಹ ಕೈಗಾರಿಕಾ ತರಬೇತಿ, ಹಾಗೂ ಉತ್ಪಾದನೆಗೆ ಪ್ರೋತ್ಸಾಹ ನೀಡುವುದು.
ಸಂಘಗಳಲ್ಲಿ ಕ್ರೀಡೆ, ಸಾಂಸ್ಕøತಿಕ ಕಾರ್ಯಕ್ರಮಗಳನ್ನು ಅಳವಡಿಸಿವುದು ಪ್ರೋತ್ಸಾಹಿಸುವುದು.
ಸಮುದಾಯದ ಮಕ್ಕಳಿಗೆ ಶಿಕ್ಷಣಕ್ಕೆ ಪ್ರೋತ್ಸಾಹಿಸುವುದು.

ಒಕ್ಕೂಟದಲ್ಲಿ ಗುರು ಪೂರ್ಣಿಮಾ, ಸತ್ಯ ನಾರಾಯಣ ಪೂಜೆ ಇತ್ಯಾದಿ ಧಾರ್ಮಿಕ ಪೂಜೆಗಳನ್ನು ನೆರವೇರಿಸುವುದು.

ಸಂಘದ ವಸತಿ ಸಮುಛ್ಛಯ/ಕಟ್ಟಡ ಹಾಗೂ ಇದರ ಕಟ್ಟಡ ಉಪಕರಣಗಳನ್ನು ರಕ್ಷಿಸುವುದು ಮತ್ತು ನಿರ್ವಾಹಣೆ ಮಾಡುವುದು.

ಸ್ಥಳೀಯ ಸಂಘ/ಸಮಿತಿ/ ಗುಂಪುಗಳಲ್ಲಿರುವ ಸಮಸ್ಯೆಗಳಿಗೆ ಪರಿಹಾರವನ್ನು ಕಂಡುಕೊಳ್ಳುವುದು. ಸಂಘವನ್ನು ಬಲಪಡಿಸಲು ಸಹಕರಿಸುವುದು.
ಸಂಘಗಳ ಯಾವುದೇ ವಿಷಯಗಳು ಲಿಖಿತ ಮೂಲಕ ಬಂದಲ್ಲಿ ಆಡಳಿತ ಮಂಡಳಿಯಲ್ಲಿ ಚರ್ಚಿಸಿ ಪರಿಹಾರ ಕಂಡುಕೊಳ್ಳುವುದು.

ಸೈಟ್ ಮಾಧ್ಯಮದ ಮೂಲಕ ಒಕ್ಕೂಟದ ವ್ಯವಸ್ಥೆ ಮತ್ತು ಕಾರ್ಯಕ್ರಮದ ಬಗ್ಗೆ ಇತರ ಎಲ್ಲಾ ವಿಷಯಗಳು ಪಾರದರ್ಶಕವಾಗಿರುವಂತೆ ವ್ಯವಸ್ಥೆ ಮಾಡುವುದು.

ಒಕ್ಕೂಟದ ಕಾರ್ಯವ್ಯಾಪ್ತಿ :

ಕರ್ನಾಟಕ ರಾಜ್ಯದ ಎಲ್ಲಾ ತಾಲೂಕು ಮತ್ತು ಗ್ರಾಮಗಳು.

ಒಕ್ಕೂಟದ ವಿವರಗಳು :

ಅ. ಪ್ರತಿನಿಧಿ ವಾರ್ಷಿಕ ಸದಸ್ಯತ್ವ ವನ್ನು ಮತ್ತು ನಿಗದಿತ ಸದಸ್ಯತ್ವವನ್ನು ರಾಜ್ಯ ಒಕ್ಕೂಟದ ಕಾರ್ಯಕಾರಿ ಮಂಡಳಿಯಲ್ಲಿ ತೀರ್ಮಾನಿಸುವುದು.
ಆ. ಸದಸ್ಯತ್ವ ವಿಧ – ಂ (ಎ) ವರ್ಗ – ಸಂಘಟನೆಗಳ / ಒಕ್ಕೂಟ ಘಟಕಗಳ ಸದಸ್ಯತ್ವ
(ಬಿ) ವರ್ಗ – ಪ್ರತಿನಿಧಿ ರಾಜ್ಯ ಸದಸ್ಯತ್ವ
ಅ (ಸಿ) ವರ್ಗ – ಖಾಯಂ ಸದಸ್ಯತ್ವ (ರಾಜ್ಯ ಕಾರ್ಯಕಾರಿ ಮಂಡಳಿಯನ್ನು ನಿರ್ವಹಿಸಿರುವ,
ಸಿ ವರ್ಗದ ಸದಸ್ಯತ್ವ ಪಡೆಯಲು ಬಿ ವರ್ಗದ ಸದಸ್ಯತ್ವ ಪಡೆಯತಕ್ಕದ್ದು.

01 ಕಾರ್ಯಕಾರಿ ಮಂಡಳಿಯು ಮಂಡಿಸಿದ ವಾರ್ಷಿಕ ವರದಿಯನ್ನು ಅನುಮೋದಿಸುವುದು.
02 ಇತ್ತೀಚಿನ ಲಭ್ಯವಿರುವ ಲೆಕ್ಕ ಪರಿಶೋಧನಾ ವರದಿಯನ್ನು ಪರಿಶೀಲಿಸುವುದು/ಮಂಡಿಸುವುದು.
03 ಏನಾದರೂ ವಿಚಾರಣಾ ವರದಿ ಇದ್ದರೆ ಅದನ್ನು ಪರ್ಯಾಲೋಚಿಸುವುದು. ಮುಂದಿನ ಸಾಲಿಗೆ ಆಡಳಿತ ಮಂಡಳಿಯವರು ಅಥವಾ ಅಧ್ಯಕ್ಷರು ರಚಿಸಿದ ಸಂಘದ ಚಟುವಟಿಕೆಗಳ ಕಾರ್ಯಕ್ರಮವನ್ನು ಅನುಮೋದಿಸುವುದು.
04 ವಾರ್ಷಿಕ ಅಯ ವ್ಯಯ ಪಟ್ಟಿಯನ್ನು ಮಂಜೂರು ಮಾಡುವುದು.
05 ಒಂದು ನಿರ್ದಿಷ್ಟ ನಿಧಿಯನ್ನು ಮತ್ತು ಇತರ ನಿಧಿಗಳನ್ನು ಸೃಷ್ಟಿಸುವುದು.
06 ಉಪನಿಬಂಧನೆಗಳಿಗೆ ತಿದ್ದುಪಡಿ.
07 ಕಾರ್ಯಕಾರಿ ಮಂಡಳಿ ಸದಸ್ಯರ ಪದಾಧಿಕಾರಿಗಳ ನೀತಿ ಸಂಹಿತೆಯನ್ನು ರಚಿಸವುದು.

ಅ. ಸಂಘದ/ ಒಕ್ಕೂಟ ಅಧ್ಯಕ್ಷರು ಯಾವುದೇ ಕಾಲಕ್ಕೆ ತಮಗೆ ಸೂಕ್ತ ತೋರಿದಾಗ ವಿಶೇಷ ಸರ್ವಸದಸ್ಯರ ಸಭೆಯನ್ನು ಕರೆಯಬಹುದಾಗಿದೆ. ಅಥವಾ
ಆ.ವಿಜ್ಞಾಪನೆ ತಲುಪಿದ ಮೇಲಿನ ಒಂದು ತಿಂಗಳ ಅವಧಿ ಒಳಗೆ ಅಂತಹ ಸಭೆಯನ್ನು ಅಧ್ಯಕ್ಷರು ಕರೆಯುವ ವ್ಯವಸ್ಥೆಮಾಡತಕ್ಕದ್ದು
ಇ. ಮಹಾಸಭೆ ಮತ್ತು ವಿಶೇಷ ಮಹಾಸಭೆಗೆ ಆಮಂತ್ರಣ ನೋಟೀಸನ್ನು ಸದಸ್ಯರಿಗೆ ‘7’’ ದಿನಗಳಿಗೆ ಮುಂಚಿತವಾಗಿ ನೀಡತಕ್ಕದು.

ವಿವಿಧ ಪದಾಧಿಕಾರಿಗಳನ್ನು ಮಾಡಿ ರಾಜ್ಯ ಸಮಿತಿಯ ಅನುಮೊದನೆ ಪಡೆದು ವ್ಯವಹಾರಿಸುವುದು.

1. ದೂರುಗಳನ್ನು ಸ್ವೀಕರಿಸುವುದು – ಅವುಗಳ ವಿಚಾರಣೆ ಮಾಡುವುದು.
2. ಸಂಘದ ದಿನಚರಿಯಲ್ಲಿ ಬರುವ ಖರ್ಚುಗಳನ್ನು ಮಂಜೂರು ಮಾಡುವುದು.
3. ಕಟ್ಟಡ ಕಾಮಗಾರಿಕೆಯ ಪರಿಶೀಲನೆಗೆ ಇಂಜಿನಿಯರ್‍ಗಳ ನೇಮಕ ಮಾಡುವುದು.
4. ಸಂಘದ ಕಛೇರಿಯ ಕಾರ್ಯಚಟುವಟಿಕೆಗಳ ಮೇಲ್ವಿಚಾರಣೆ ಮಾಡುವುದು.
5. ಸಂಘಕ್ಕೆ ಸಂಬಂಧಪಟ್ಟ ಸಂಘ ಸಂಸ್ಥೆಗಳಲ್ಲಿ ಸದಸ್ಯತ್ವ ಮತ್ತು ಶೇರುಗಳನ್ನು ಪಡೆಯುವುದು ಮತ್ತು ಅವುಗಳ ಚಂದಾ ಪಾವತಿ ಮಾಡುವುದು.
6. ದೇಣಿಗೆ, ಜಾಹೀರಾತು ಸಂಗ್ರಹಿಸುವುದು.
7. ಸಂಘದ ಉತ್ತಮ ಹಾಗೂ ಪರಿಣಾಮಕಾರಿ ಕಾರ್ಯ ನಿರ್ವಹಣೆಗಾಗಿ ಮಾಡಬಹುದಾದ ಖರ್ಚುಗಳ ವಾರ್ಷಿಕ ಅಂದಾಜನ್ನು ತಯಾರಿಸುವುದು.
8. ವಧು- ವರರ ಅನ್ವೇಷಣೆ ಕಾರ್ಯಕ್ರಮ ನೆರವೇರಿಸುವುದು.
9. ಪ್ರತಿ ವರ್ಷ ಸಂಘದ ನೋಂದಣಿಯನ್ನು ಇಲಾಖೆಯಲ್ಲಿ ನವೀಕರಿಸುವುದು.
10. ವಿದ್ಯಾರ್ಥಿ ವೇತನವನ್ನು ನೀಡುವ ವ್ಯವಸ್ಥೆ.
11. ಪ್ರತಿ ವರ್ಷ ಸಂಘದ ನೋಂದಣಿಯನ್ನು ಇಲಾಖೆಯಲ್ಲಿ ನವೀಕರಿಸುವುದು .
12. ಒಕ್ಕೂಟಆಂತರಿಕ ಲೆಕ್ಕಪತ್ರವನ್ನು ಪರಿಶೀಲಿಸಲು ಒಕ್ಕೂಟ ಸದಸ್ಯರಲ್ಲಿ ಒಬ್ಬರನ್ನು ಆಂತರಿಕ ಲೆಕ್ಕ ಪರಿಶೋಧಕರಾಗಿ ನೇಮಿಸುವುದು.
13. ಮಡೀವಾಳರ ಸಂಘಟನೆ ಗಳ ಸದಸ್ಯತ್ವವನ್ನು ಸಂಗ್ರಹಿಸುವುದು.
14. ಕ್ರೀಡೆ, ಸಾಂಸ್ಕøತಿಕ, ಸಮಾಜ ಸೇವೆ ಕಾರ್ಯಕ್ರಮಗಳನ್ನು ನೆರವೇರಿಸುವುದು.
15. ಒಕ್ಕೂಟ ಅಭಿವೃದ್ಧಿಗೆ ವಿವಿಧ ಸಮಿತಿಗಳನ್ನು ರಚಿಸುವುದು ಮತ್ತು ವಿಸರ್ಜಿಸುವುದು.
16 ಸ್ಮರಣ ಸಂಚಿಕೆಯನ್ನು ಮುದ್ರಿಸುವುದು,ಮತ್ತು ಒಕ್ಕೂಟದ ಹೆಸರಿನಲ್ಲಿ ಮಾಸಿಕ ಪತ್ರಿಕೆಯನ್ನು ಮಾಡುವುದು.

ವಿವಿಧ ಘಟಕಗಳು

“B,C” ಸದಸ್ಯತ್ವ ವನ್ನುಪಡೆದ ಸದಸ್ಯರು ಗ್ರಾಮ ಘಟಕದ ನಿಗದಿತ (10 ಸದಸ್ಯರಿಗೆ ಮೂರ ರಂತೆ) ನಿರ್ದೇಶಕರನ್ನು
ಮತವನ್ನು ನೀಡುವ ಮೂಲಕ ಆಯ್ಕೆ ಮಾಡುವುದು.

  1. ಆಯ್ಕೆ ಯಾದ ನಿರ್ದೇಶಕರ ರೋಳಗೆ ಗ್ರಾಮ ಘಟಕದ ಪಧಾಧಿಕಾರಿ ಗಳನ್ನು ಚುನಾವಣಾ ಮೂಲಕ ಆಯ್ಕೆ
    ಮಾಡುವುದು.
  2. ಚುನಾಯಿತ ಗ್ರಾಮ ಘಟಕ ಅಡಳಿತ ಮಂಡಳಿ ಅವಧಿ ಎರಡು ವರ್ಷ
    ಹೊಬಳಿ ಘಟಕ :”B,C” ಸದಸ್ಯತ್ವ ವನ್ನು ಪಡೆದ ಸದಸ್ಯರು ಹೊಬಳಿ ಘಟಕದ ನಿಗದಿತ (10 ಸದಸ್ಯರಿಗೆ ಮೂರ ರಂತೆ) ನಿರ್ದೇಶಕರನ್ನು ಮತವನ್ನು ನೀಡುವ ಮೂಲಕ ಆಯ್ಕೆ ಮಾಡುವುದು. (ಉ.ದಾ: 10 ಕ್ಕೆ 3, – 20 ಕ್ಕೆ 6, – 30 ಕ್ಕೆ 9 – 40 ಕ್ಕೆ 12, – 50 ಕ್ಕೆ 15 )

    1. ಆಯ್ಕೆ ಯಾದ ಚುನಾಯಿತ ನಿರ್ದೇಶಕರ ಒಳಗೆ ನಿಗದಿತ ಹೊಬಳಿ ಘಟಕ ಪಧಾಧಿಕಾರಿ ಗಳನ್ನು ಚುನಾವಣಾ ಮೂಲಕ ಆಯ್ಕೆ ಮಾಡುವುದು.
    2. ಚುನಾಯಿತ ಹೊಬಳಿ ಘಟಕ ಅಡಳಿತ ಮಂಡಳಿ ಅವಧಿ ಎರಡು ವರ್ಷ

ಆಯಾಯ ತಾಲೂಕು ಘಟಕದಲ್ಲಿರುವ ಹೊಬಳಿಯ ಎಲ್ಲಾ ಚುನಾಯಿತ ಪಧಾಧಿಕಾರಿಗಳು ಮತವನ್ನು ನೀಡುವ ಮೂಲಕ ಸದಸ್ಯತ್ವ ವನ್ನು ಪಡೆದ ತಾಲೂಕು ಪಧಾಧಿಕಾರಿ ಗಳನ್ನ ಆಯ್ಕೆ ಮಾಡುವುದು.
ಚುನಾಯಿತ ತಾಲೂಕು ಅಡಳಿತ ಮಂಡಳಿ ಅವಧಿ ಎರಡು ವರ್ಷ.

  1. ಆಯಾಯ ಜಿಲ್ಲಾ ಘಟಕದಲ್ಲಿರುವ ”ಸಿ” ಸದಸ್ಯತ್ವ ವನ್ನು ಪಡೆದ ಸದಸ್ಯರು ಮತವನ್ನು ನೀಡುವ ಮೂಲಕ
    ”ಸಿ” ಸದಸ್ಯತ್ವ ವನ್ನು ಪಡೆದ ಜಿಲ್ಲಾ ಪಧಾಧಿಕಾರಿ ಗಳನ್ನು ಆಯ್ಕೆ ಮಾಡುವುದು.
  2. ಚುನಾಯಿತ ಜಿಲ್ಲಾ ಅಡಳಿತ ಮಂಡಳಿ ಅವಧಿ ಮೂರು ವರ್ಷ

ಆಯಾಯ ವಿಭಾಗದ ಜಿಲ್ಲಾ ಘಟಕದಲ್ಲಿರುವ ”ಸಿ” ಸದಸ್ಯತ್ವ ವನ್ನು ಪಡೆದ ಸದಸ್ಯರು ಮತವನ್ನು ನೀಡುವ ಮೂಲಕ ವಿಭಾಗ ಘಟಕ ಪಧಾಧಿಕಾರಿ ಗಳನ್ನು ಆಯ್ಕೆ ಮಾಡುವುದು.

ಸೂಚನೆ : ಚುನಾಯಿಸಲ್ಪಟ್ಟ ವಿಭಾಗ ಘಟಕ ಅಧ್ಯಕ್ಷರು ರಾಜ್ಯ ಘಟಕದ ಉಪಾಧ್ಯಕ್ಷ ರಾಗಿರುತ್ತಾರೆ
ಚುನಾಯಿತ ವಿಭಾಗ ಅಡಳಿತ ಮಂಡಳಿ ಅವಧಿ ನಾಲ್ಕು ವರ್ಷ

  1. ”ಸಿ” ಸದಸ್ಯತ್ವ ವನ್ನು ಪಡೆದ ಸದಸ್ಯರು ಮತವನ್ನು ನೀಡುವ ಮೂಲಕ ”ಸಿ” ಸದಸ್ಯತ್ವ ವನ್ನು ಪಡೆದ ರಾಜ್ಯ ಪಧಾಧಿಕಾರಿ ಗಳನ್ನು ಆಯ್ಕೆ ಮಾಡುವುದು.
  2. ಚುನಾಯಿತ ರಾಜ್ಯ ಅಡಳಿತ ಮಂಡಳಿ ಅವಧಿ ಐದು ವರ್ಷ
  3. ವಿಭಾಗದ ಅಧ್ಯಕ್ಷರು ರಾಜ್ಯ ಸಮಿತಿಯ ಉಪಾಧ್ಯಕ್ಷರಾಗಿರುತ್ತಾರೆ.
  4. ಜಿಲ್ಲಾ ಘಟಕದ ಅಧ್ಯಕ್ಷರು ರಾಜ್ಯ ಸಮಿತಿಯ ಸದಸ್ಯ ರಾಗಿರುತ್ತಾರೆ
  5. ರಾಜ್ಯನಿರ್ದೇಶಕರನ್ನು ಹಾಗೂ ರಾಜ್ಯ ಮುಖ್ಯಸಲಹೆಗಾರರನ್ನು ಮತ್ತು ಜಿಲ್ಲಾ ಉಸ್ತುವಾರಿಗಳನ್ನು ರಾಜ್ಯಕಾರ್ಯಕಾರಿಯಲ್ಲಿ ನಿರ್ಧರಿಸಿ ನಾಮಕರಣ ಮಾಡಲಾಗುವುದು ( ಎಲ್ಲಾ ಜಿಲ್ಲಾ ವ್ಯಾಪ್ತಿಗೆ ಅನುಗುಣವಾಗಿ)

ಚುನಾಯಿತ ರಾಜ್ಯಘಟಕ ಕಾರ್ಯಕಾರಿ ಮಂಡಳಿಯ ಪದಾಧಿಕಾರಿಗಳು ಒಟ್ಟು 13

1. ಅಧ್ಯಕ್ಷರು / ಸಂಚಾಲಕರು 1
2. ಕಾರ್ಯ ಅಧ್ಯಕ್ಷರು 1
3. ಮಹಿಳಾ ವೇಧಿಕೆ ಅಧ್ಯಕ್ಷರು 1
4. ಉಪಾಧ್ಯಕ್ಷರು 4
5. ಪ್ರಧಾನ ಕಾರ್ಯದರ್ಶಿ 1
6. ಕಾರ್ಯದರ್ಶಿ 1
7. ಕೋಶಾಧಿಕಾರಿ 1
8. ವಕ್ತಾರ 1
9. ಸಂಘಟನಾ ಕಾರ್ಯದರ್ಶಿ 1
10. ಯುವ ವೇಧಿಕೆ ಅಧ್ಯಕ್ಷರು 1

ಗ್ರಾಮ, ಹೊಬಳಿ, ತಾಲೂಕು, ಜಿಲ್ಲಾ, ವಿಭಾಗ ಘಟಕಗಳ ಕಾರ್ಯಕಾರಿ ಮಂಡಳಿಯ ಪದಾಧಿಕಾರಿಗಳು ಒಟ್ಟು 13

1. ಅಧ್ಯಕ್ಷರು 1
2. ಉಪಾಧ್ಯಕ್ಷರು 1
3. ಪ್ರಧಾನ ಕಾರ್ಯದರ್ಶಿ 1
4. ಕಾರ್ಯದರ್ಶಿ 1
5. ಕೋಶಾಧಿಕಾರಿ 1
6. ವಕ್ತಾರ 1
7. ಸಂಘಟನಾ ಕಾರ್ಯದರ್ಶಿ 1
ನಿರ್ದೆಶಕರು
ಸಹಾಯ ನಿರೀಕ್ಶಿಸುವಿರೆ?

ನಿಮಗೆ ಹತ್ತಿರವಿರುವ ನಮ್ಮ ಸಲಹಾ ಕಚೇರಿಯಲ್ಲಿ ನಮ್ಮನ್ನು ಸಂಪರ್ಕಿಸಿ ಅಥವಾ ನಮ್ಮ ಸಂಪರ್ಕ ಫಾರ್ಮ್ ಮೂಲಕ ವ್ಯವಹಾರ ವಿಚಾರಣೆಯನ್ನು ಸಲ್ಲಿಸಿ.

ನಮ್ಮ ಸದಸ್ಯತ್ವ ಬೇಕೇ? ಕೂಡಲೇ ಕರೆ ಮಾಡಿ...