ಬೆಳ್ತಂಗಡಿ ತಾಲೂಕು ಘಟಕ ಪ್ರತಿಭಾ ಪುರಸ್ಕಾರ
- June 25, 2023
- Posted by: admin
- Category: Our Activities
ಕರ್ನಾಟಕ ರಾಜ್ಯ ಮಡಿವಾಳರ ಸಂಘಟನೆಗಳ ಒಕ್ಕೂಟ ಬೆಳ್ತಂಗಡಿ ತಾಲೂಕು ಘಟಕ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವು ಬೆಳ್ತಂಗಡಿ ತಾಲೂಕಿನ ಬೆಳ್ಳಂಗ ನಾಗ ಬ್ರಹ್ಮಲಿಂಗೇಶ್ವರ ದೇವಸ್ಥಾನ ಬದಿ ನಡೆಂಜ ದಲ್ಲಿ ದಿನಾಂಕ 25nee ಭಾನುವಾರ ನಡೆಯಿತು. ಈ ಕಾರ್ಯಕ್ರಮದಲ್ಲಿ ಸಭೆಯ ಅಧ್ಯಕ್ಷತೆಯನ್ನು ಅಶೋಕ್ ಪಾನೂರ್ ಮುಖ್ಯ ಅತಿಥಿಗಳಾಗಿ ಕರ್ನಾಟಕ ರಾಜ್ಯ ಮಡಿವಾಳರ ಸಂಘಟನೆಗಳ ಒಕ್ಕೂಟದ ರಾಜ್ಯ ಅಧ್ಯಕ್ಷರಾದ ಕಟೀಲು ಸಂಜೀವ ಮಡಿವಾಳ, ಶ್ರೀ ಶಸ್ತಾರ
ನಾಗ ಬ್ರಹ್ಮಲಿಂಗೇಶ್ವರ ದೇವಸ್ಥಾನ ಬದಿನೆಡೆ ಬಳಂಜಾ ಧರ್ಮದರ್ಶಿ ಜಯಸಾಲಿಯನ್,ಗ್ರಾಮ ಪಂಚಾಯತ್ ಸದಸ್ಯರಾದ ರಂಜಿತ್ ಪಾರಿಜಾತ,ವಿಠ್ಠಲ್ ಕೆ ಅಳದಂಗಡಿ ನಿವೃತ್ತ ಮುಖ್ಯೋಪಾಧ್ಯಾಯಣಿ ಶ್ರೀಮತಿ ಜಾನಕಿ ಕುಂದರ್ ಅಂಡಿಂಜೆ ಒಕ್ಕೂಟದ ಬೆಳ್ತಂಗಡಿ ತಾಲೂಕು ಘಟಕದ ಅಧ್ಯಕ್ಷರಾದ ಶ್ರೀ ಗಣೇಶ್ ಸಾಲಿಯಾನ್ ಮತ್ತು ಜಿಲ್ಲಾ ಘಟಕದ ಅಧ್ಯಕ್ಷರಾದ ಶ್ರೀ ಸತೀಶ್ ವೇಣೂರು ಇವರು ಉಪಸ್ಥಿಯಲ್ಲಿ ನಡೆಯಿತು. ಶ್ರೀ ದೇವೇಂದ್ರ ಬುನಾನ್ ಮುಂಬೈ ಇವರ ಮಾತೃಶ್ರೀ ದಿವಂಗತ ಜಾನಕಿ ಬಿ ಬುನ್ನಾನ್ ಇವರ ಸ್ಮರಣಾರ್ಥವಾಗಿ ಎಸ್ ಎಸ್ ಎಲ್ ಸಿ ಮತ್ತು ಪಿಯುಸಿಯಲ್ಲಿ ಅತ್ಯುತ್ತಮ ಅಂಕವನ್ನು ಪಡೆದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರವನ್ನು ನೀಡಿ ಗೌರವಿಸಲಾಯಿತು.